Join us on a literary world trip!
Add this book to bookshelf
Grey
Write a new comment Default profile 50px
Grey
Listen online to the first chapters of this audiobook!
All characters reduced
Katiharada Tiruvu - cover
PLAY SAMPLE

Katiharada Tiruvu

Karthikadithya Belgodu

Narrator Siddhu Koppa

Publisher: Storyside IN

  • 0
  • 0
  • 0

Summary

ಇಲ್ಲಿನ ಬಹುತೇಕ ಯಾವ ಕತೆಗಳೂ ಕಾಲ್ಪನಿಕವಲ್ಲ. ಅವೆಲ್ಲವೂ ನಾನು ಕಂಡು, ಕೇಳಿ, ಅನುಭವಕ್ಕೆ ದಕ್ಕಿದಂತಹುವೇ...
ಗಂಭೀರ ಕಥೆಗಳ ನಡುವೆ ಬರುವ ಹಾಸ್ಯ, ಇಡೀ ಕಥೆಗಳ ನಡುವೆ ನುಸುಳಿಕೊಂಡಿರುವ ಒಂದೆರಡು ಹಾಸ್ಯದ ಕಥೆಗಳು ಗಂಭೀರ ಸಿನಿಮಾದ ನಡುವೆ ಬರುವ ಮಧ್ಯಂತರದ ಬ್ರೇಕ್ ನಂತಿರಲಿ ಎಂದು ಬರೆದಿದ್ದು.
ಸಾಮಾನ್ಯವಾಗಿ ಈ ಸಂಕಲನದ ಎಲ್ಲಾ ಕಥೆಗಳನ್ನೂ ಸಾಮಾಜಿಕ ಸ್ಥಿತ್ಯಂತರ, ಆರ್ಥಿಕ ಅಸಮತೋಲನ, ಪಾರಿಸರಿಕ ಸಮಸ್ಯೆಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಪೀಡಿತ ಹುಚ್ಚಾಟಗಳು... ಇವನ್ನೇ ಹಿನ್ನೆಲೆಯಾಗಿಟ್ಟುಕೊಂಡು ಬರೆದಿದ್ದೇನೆ.
ಇಲ್ಲಿರುವ ಹನ್ನೊಂದು ಕಥೆಗಳಲ್ಲಿ ಎರಡು ಕಥೆಗಳು ಮಾತ್ರ ನನ್ನನ್ನು ಬರೆಯುವ ಮುನ್ನ, ಬರೆಯುವ ಸಮಯದಲ್ಲಿ ಹಾಗೂ ಬರೆದ ನಂತರವೂ ಕಾಡಿದಂತವು.
ಅವುಗಳಲ್ಲಿ ಒಂದು, ಬೊಮ್ಮ ಹಾಗೂ ಇನ್ನೊಂದು, ಕಾಟಿಹರದ ತಿರುವು. ಇವೆರಡೂ ಕಥೆಯ ಕಥಾನಾಯಕರ ದುರಂತ ಅಂತ್ಯವನ್ನು ನಾನು ಕಣ್ಣಾರೆ ಕಂಡವನು. ಒಬ್ಬ ಅವಿದ್ಯಾವಂತ, ಅಮಾಯಕ. ಮತ್ತೊಬ್ಬ ಅಸಮಾನ್ಯ ಬುದ್ದಿವಂತ. ಒಬ್ಬ ಸಾಮಾಜಿಕ ಅಸಮಾನತೆಗೆ ಬಲಿಪಶುವಾದವನು, ಇನ್ನೊಬ್ಬ ಸಮಾಜದ ಅಸಮಾನತೆಯನ್ನು ತಿದ್ದಲು ಹೊರಟು ಬಲಿಯಾದವನು.
ನಾನೆಷ್ಟೇ ಬರೆದರೂ ಇವೆರಡು ಕಥೆಗಳು, ಪಾತ್ರಗಳು ಮಾತ್ರ ದೀರ್ಘಕಾಲ ನನ್ನೊಳಗೆ ಜೀವಂತವಿರುತ್ತವೆ.
Duration: about 6 hours (05:32:48)
Publishing date: 2022-03-15; Unabridged; Copyright Year: 2022. Copyright Statment: —