ಮುಚ್ಚಿದ ಬಾಗಿಲು - ತ್ರಿವೇಣಿ Mucchida Bagilu by TRIVENI - Psychological Novel
Triveni
Narratore S. Ravishankar
Casa editrice: Triveni Shankar Sahitya Prathisthana(R))ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ)
Sinossi
ಮುಚ್ಚಿದ ಬಾಗಿಲು - ತ್ರಿವೇಣಿ ಭವ್ಯವಾದ ಕಲ್ಲು ಕಟ್ಟಡ ಮಹಾ ಮೌನಿಯೊಬ್ಬ ಗಂಭೀರವಾಗಿ ನಿಂತು ತಪಸ್ಸು ಮಾಡುತ್ತಿರುವಂತೆ ಕಾಣುತ್ತಿತ್ತು. ಈ ಕಲ್ಲು ಕಟ್ಟಡದ ಒಳಗೆ ಎಷ್ಟು ಜನರ ಆಸೆ ಆಕಾಂಕ್ಷೆಗಳು ಬೂದಿಯಾಗಿ ಭವಿಷ್ಯ ಹಾಳಾಗಿದೆಯೋ? ಎಷ್ಟು ಜನರು ಆಸೆಯ ಹೊಂಬೆಳಕನ್ನು ಕಾಣಲು ಆತುರರಾಗಿರುವರೋ? ನಾನು ಕಬ್ಬಿಣದ ಬಾಗಿಲನ್ನು ದಾಟಿ ಹೊರಗೆ ಬಂದೆ. ನನ್ನ ಹಿಂದೆಯೇ ಬಾಗಿಲು ಮುಚ್ಚಿಕೊಂಡಿತು. ದಪ್ಪನಾದ ಬೀಗವೊಂದು ಚಿಲಕಕ್ಕೆ ಬಿತ್ತು. ಇಲ್ಲಿ ನಗುವೇ ಅಳುವಾಗುತ್ತಿತ್ತು. ಅಳು ನಗುವಾಗುತ್ತಿತ್ತು. ಹಾಡು, ಮಾತು, ಹರಟೆ, ಹೊಡೆದಾಟ, ನೆಗೆದಾಟ, ಕಿರಿಚಾಟ ಯಾವುದಕ್ಕೂ ಇಲ್ಲಿ ಅಭಾವವಿರಲಿಲ್ಲ. ರೋಗಿಯ ನಗುವನ್ನು ನೋಡುತ್ತಿದ್ದಂತೆ ನಮಗೆ ಕಣ್ಣಿನಲ್ಲಿ ನೀರು ಬರುವಂತಾಗುತ್ತಿತ್ತು. ಆದರೆ ನಮಗೂ ಅವರಿಗೂ ಏನು ವ್ಯತ್ಯಾಸ? ನಮ್ಮ ಮನದ ಬಾಗಿಲು ಯಾವಾಗಲೂ ಮುಚ್ಚಿರುತ್ತದೆ. ಆದುದರಿಂದ ಹೊರಗಿನವರಿಗೆ ನಾವು ನಯವಾಗಿ, ನಾಗರೀಕರಾಗಿ ಕಾಣುತ್ತೇವೆ. ಮನಸ್ಸಿನಲ್ಲಿ ಅಸಭ್ಯತೆಯಿದ್ದರೂ, ನಾಲಿಗೆ ಸಭ್ಯತನದ ಮಾತುಗಳನ್ನಾಡುತ್ತದೆ. ಮುಚ್ಚಿದ ಬಾಗಿಲು ತೆಗೆದುಕೊಂಡರೆ? ಆಗ ಮನಸ್ಸಿನ ಹುಳುಕು, ಅಸಭ್ಯತನ, ಕೊಳೆ, ಹೊರಗಿನವರಿಗೆ ಗೋಚರವಾಗುತ್ತದೆ. ಒಂದು ವಿಧದಲ್ಲಿ ನಮಗಿಂತಲೂ, ಮಾನಸಿಕ ರೋಗಗಳಿಂದ ನರಳುವವರೇ ನಿಷ್ಕಪಟಿಗಳು. ನಾವು ಎಲ್ಲವನ್ನೂ ಮುಚ್ಚಿಡುತ್ತೇವೆ. ಅವರು ಮನಸ್ಸಿಗೆ ಬಂದುದನ್ನು ಬಾಯಲ್ಲಿ ಆಡಿ ತೋರಿಸಿ ‘ಹುಚ್ಚರು’ ಎಂದೆನಿಸಿಕೊಳ್ಳುತ್ತಾರೆ. Triveni ತ್ರಿವೇಣಿ Triveni Shankar Sahitya Prathisthana(R) ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ)
Durata: circa 6 ore (05:50:52) Data di pubblicazione: 25/06/2023; Unabridged; Copyright Year: — Copyright Statment: —

