Unisciti a noi in un viaggio nel mondo dei libri!
Aggiungi questo libro allo scaffale
Grey
Scrivi un nuovo commento Default profile 50px
Grey
Ascolta online i primi capitoli di questo audiolibro!
All characters reduced
Thuglaq - cover
RIPRODURRE CAMPIONE

Thuglaq

Girish Karnad

Narratore Multiple

Casa editrice: Storyside IN

  • 0
  • 0
  • 0

Sinossi

ಗಿರೀಶ ಕಾರ್ನಾಡರ ಅತ್ಯಂತ ಜನಪ್ರಿಯ ಮತ್ತು ಮಹತ್ವದ ರಂಗಕೃತಿ 'ತುಘಲಕ್;. ಭಾರತೀಯ ರಂಗಭೂಮಿಯಲ್ಲಿಯೇ ಈ ನಾಟಕಕ್ಕೆ ವಿಶೇಷ ಸ್ಥಾನ ಇದೆ. ಹಲವು ಭಾರತೀಯ ಭಾಷೆಗಳಿಗೆ ಅನುವಾದ ಆಗಿರುವ ಈ ಕೃತಿಯು ರಂಗಕ್ರಿಯೆ-ತಾತ್ವಿಕತೆ-ಕಟ್ಟಿರುವ ಕ್ರಮದ ಕಾರಣದಿಂದಾಗಿ 'ಮಾಸ್ಟರ್‌ ಪೀಸ್' ಎಂದು ಗುರುತಿಸಲಾಗುತ್ತದೆ. ಮಧ್ಯಕಾಲೀನ ಭಾರತದ ಕನಸುಗಾರ ದೊರೆ ಮಹ್ಮದ್ ಬಿನ್ ತುಘಲಕ್ ಈ ನಾಟಕದ ವಸ್ತು. ಐತಿಹಾಸಿಕ ವಸ್ತುವನ್ನು ಆಯ್ಕೆ ಮಾಡಿದ ಗಿರೀಶ್ ಅವರು ಅದನ್ನು ಆಧುನಿಕ ಸಂವೇದನೆಗೆ ಒಗ್ಗಿಸಿದ ರೀತಿ ಮಾತ್ರ ಅನನ್ಯ. ಗಿರೀಶ್ ಅವರ 'ತುಘಲಕ್'ನ ಕನಸುಗಾರಿಕೆ, ಅದನ್ನು ನನಸಾಗಿಸುವ ದಾರಿಯಲ್ಲಿ ನಡೆಯುವ ಬದಲಾವಣೆ-ಬೆಳವಣಿಗೆ 'ನೆಹರು ಯುಗ'ದ ಸಂವಾದಿಯಾಗುವ ಹಾಗಿತ್ತು. ಸಮಕಾಲೀನ ಆಗುವ ಗುಣ ತುಘಲಕ್ ನಾಟಕದ ವಿಶೇಷ. ತುಘಲಕ್ ನಾಟಕದಲ್ಲಿ ಸೈನಿಕನೊಬ್ಬ 'ನಮ್ಮ ದೊರೆ ಕಟ್ಟಿದ ಕೋಟೆ ಎಷ್ಟು ಭದ್ರವಾಗಿದೆ ಎಂದರೆ ಅದನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಅದು ಒಳಗಿನ ಭಾರಕ್ಕೇ ಕುಸಿಯಬೇಕು'. ಸಾಹಿತ್ಯ ಕೃತಿಯಾಗಿ ಮತ್ತು ರಂಗಪಠ್ಯವಾಗಿ ತುಘಲಕ್ ಅಪಾರ ಜನಮನ್ನಣೆಯ ಜೊತೆಗೆ ವಿಮರ್ಶಕರ-ವಿದ್ವಾಂಸರ-ರಂಗಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತ.
Durata: circa 3 ore (03:11:39)
Data di pubblicazione: 25/05/2022; Unabridged; Copyright Year: 2022. Copyright Statment: —